ರೊಟ್ಟಿ ತಟ್ಟುವ ಸಂಭ್ರಮ | ||||||||
ಅಕ್ಷರ ಕಾವ್ಯ : ಡಾ. ಕೆ. ಎನ್. ದೊಡ್ಡಮನಿ , ಬೆಳಗಾವಿ . | ||||||||
ಒಂದು ಕಾಲು ಇತ್ತು: | ||||||||
ಕಾರಜ್ವಾಳ - ಬಿಳಿಜ್ವಾಳ ಭಯಂಕರ ಸುಗ್ಗಿ | ||||||||
ಬೆಳ್ಳಿಚುಕ್ಕಿ ಮೂಡಿ ಬೆಳಕ ಹರಿಯೊದ್ರೊಳಗ | ||||||||
ಕಲ್ಲಿನ ನಾದನ್ಯಾಗ ಹಾಡಿನ ಸೊಲ್ಲ ಬೆರಸಿ | ||||||||
ಸಿಗಾರೇರಿ ಬೀಸಿದ ಹಿಟ್ಟನಾದಿ, ರುಬ್ಬಿ | ||||||||
ರೊಟ್ಟಿ ಮಾಡ್ತಿದ್ದರು ನಮ್ಮವ್ವ , | ||||||||
ಚಿಗವ್ವ ಎಲ್ಲರೂ ಒಲಿಮ್ಯಾಲ. | ||||||||
ಹಸಿಬಿಸಿ ಶೆಗಣಿ ಕುಳ್ಳ | ||||||||
ಹಾದಿಬೀದಿ ಮ್ಯಾಲಿನ ಕಳ್ಳಿಕಟ್ಟಿಗಿ | ||||||||
ಕರಿ ನೆಲದಾಗ ಕಿತ್ತಿಬಿದ್ದ ಖ್ವಾಡವಿ ಆರಸಿ | ||||||||
ಬಾಜು ಮನ್ಯಾಗಿನ ಬೆಂಕಿಲೆ ಒಲಿ ಹೊತ್ತಿಸಿ | ||||||||
ಬಡದ ರೊಟ್ಟಿ ಮಾಡ್ತಿದ್ದರು, | ||||||||
ಇಡೀ ಓಣಿಗೇ ಕೇಳುಹಾಂಗ . | ||||||||
ಅಡುಗಿ ಮನ್ಯಾಗ | ||||||||
ಮೈಮುರ್ ಕೊಂಡ ಬಿದ್ದ ಕತ್ಲ್ಯಾಗ | ||||||||
ಉಸರಗಟ್ಟಿ ಸಾಯೋ ಹೊಗಿಯೊಳಗs | ||||||||
ಒಲ್ಯಾಗ ಮಾರಿಹಾಕಿ | ||||||||
ಊದಿ ಉರಿ ಮಾಡಿ | ||||||||
ರೊಟ್ಟಿ ಬೇಸತ್ತಿದ್ದಳು ನಮ್ಮವ್ವ | ||||||||
ತವ್ಯಾಗ ಉಬ್ಬಿದ ರೊಟ್ಟಿ ನೋಡಿ ನಾವೂ s | ||||||||
ಕುಣದ ಕುಪ್ಪಳಿಸಿ | ||||||||
ಹಸದ ಹಲ್ಲಕಿಸದ | ||||||||
ಅವ್ವಕೊಟ್ಟ ಅದs ಬಿಸಿರೊಟ್ಟಿ | ||||||||
ಕೈಸುಟ್ಕೊಂತ ಅಂಗಳದಾಗ | ||||||||
ಹಾಸಿದ ಬೆಳದಿಂಗಳನ್ಯಾಗ | ||||||||
ಹಾಡ್ಯಾಡಿ ತಿಂದ | ||||||||
ಅಲ್ಲೇ ನಿದ್ದಿ ಹೋಗತಿದ್ವಿ . | ||||||||
ಮಾರ್ಡನ್ ಹಾಡ ಹಾಡ್ಕೊಂತs | ||||||||
ಈಗ ನನ್ನ ಹೆಂಡ್ತಿನೂs | ||||||||
ರೊಟ್ಟಿ ಮಾಡ್ತಾಳ | ||||||||
ಕಿಚನ ರೂಮನ್ಯಾಗ ನಿಂತ- | ||||||||
ನಡಮಟ ಕಟ್ಟಿದ ಕಟ್ಟಿಮ್ಯಾಲ | ||||||||
ಗ್ಯಾಸ ಸಿಲೆಂಡರ ಒಲಿಹೊತ್ತಿಸಿ | ||||||||
ಹಾಂ ಅನ್ನೊದಕs ರೊಟ್ಟಿರೆಡಿ! | ||||||||
ಆದರ, | ||||||||
ನಮ್ಮವ್ವನ ರೊಟ್ಟಿಹಾಂಗ ಹೆಂಡ್ತಿ ರೊಟ್ಟಿ | ||||||||
ತವ್ಯಾಗ ಉಬ್ಬಿ ನಿಲ್ಲಾಂಗಿಲ್ಲ | ||||||||
ಎತ್ತಿಹಿಡದರ ಕೈಯಾಗೂs ನಿಲ್ಲಾಂಗಿಲ್ಲ. | ||||||||
ಹಿಂಗ್ಯಾಕs ನಿನ್ನ ರೊಟ್ಟಿ? | ||||||||
ಅಂತ ಹೆಂಡ್ತಿನ ಕೇಳಿದರ: | ||||||||
ಅವಹಂಗ! | ||||||||
ಹೈಬ್ರಿಡಜ್ವಾಳ ರೊಟ್ಟಿ ಅಂತಾಳ!! |
Sunday, 20 December 2009
ರೊಟ್ಟಿ ತಟ್ಟುವ ಸಂಭ್ರಮ
Subscribe to:
Post Comments (Atom)
1 comment:
ವೀಣಾ...ಬಿಸಿ ಬಿಸಿ ಜ್ವಾಳದ ರೊಟ್ಟಿ ತಿಂದ್ ಹಂಗಾತ್ ನೋಡ್ರಿ...ಭಾಳ ಛಂದ್ ಐತಿ....
Post a Comment